Monday, April 21, 2008

ಪ್ಲಾಸ್ಟಿಕ್ ಉದ್ದಿಮೆಗೆ ಸುಶಿಕ್ಷಿತರನ್ನು ಒದಗಿಸುತ್ತಿರುವ-ಸಿಪೆಟ್


ಎಷ್ಟು ವರ್ಷಗಳಾದರೂ ಹಾಳಾಗದ ತುಕ್ಕು ಹಿಡಿಯದ ಗುಣ, ಎಲ್ಲಿಗಾದರೂ, ಯಾವುದೇ ಕಾಲದಲ್ಲಾದರೂ ಸುಲಭವಾಗಿ ಸಾಗಿಸಬಹುದಾದ, ಎಷ್ಟೋ ಬಣ್ಣಗಳೊಂದಿಗೆ ನೋಡುಗರ ಮನಸೂರೆಗೊಳ್ಳುವ ಲಕ್ಷಣ ಪ್ಲಾಸ್ಟಿಕ್‌ಗೆ ಇದೆ. ಗೃಹೋಪಯೋಗಿ ವಸ್ತುಗಳೇ ಅಲ್ಲದೆ ಅಲಂಕಾರಕ ವಸ್ತುಗಳ ತಯಾರಿಕೆಯಲ್ಲೂ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಬೇಡಿಕೆ, ಉಪಯೋಗ ಬೆಳದಂತೆ ಪ್ಲಾಸ್ಟಿಕ್ ತಯಾರಿಕೆ ಒಂದು ಉದ್ಯಮವಾಗಿ ರೂಪಗೊಂಡಿದೆ. ಈ ಕ್ಷೇತ್ರಕ್ಕೆ ಸುಶಿಕ್ಷಿತ ಅಭ್ಯರ್ಥಿಗಳೊಂದಿಗೆ, ತಾಂತ್ರಿಕ ಸೇವೆಗಳನ್ನೂ ನೀಡಬೇಕೆಂಬ ಉದ್ದೇಶದಿಂದ ಭಾರತ ಸರ್ಕಾರ 1968ರಲ್ಲಿ ಸೆಂಟ್ರಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ(ಸಿಪೆಟ್)ನ್ನು ಸ್ಥಾಪಿಸಿತು. ತಮಿಳುನಾಡಿನ ಚೆನ್ನೈ ಪ್ರಧಾನ ಕೇಂದ್ರವಾಗಿರುವ ಸಿಪೆಟ್ ಕೇಂದ್ರ ಸರ್ಕಾರದ ರಸಾಯನಿಕ, ರಸಗೊಬ್ಬರ ಸಚಿವಾಲಯದ ರಸಾಯನಿಕಗಳು, ಪೆಟ್ರೊಕೆಮಿಕಲ್ಸ್ ವಿಭಾಗದ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಕಳೆದ ಎರಡು ದಶಕಗಳಲ್ಲಿ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ ಸಿಪೆಟ್ ಪ್ರಮುಖ ಸಂಸ್ಥೆಯಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ವಿವಿಧ ಹಂತಗಳಲ್ಲಿ ಯುಎನ್‌ಡಿಪಿ, ಯುಎನ್‌ಐಡಿಒ, ಐಎಲ್‌ಒಗಳು ಈ ಸಂಸ್ಥೆಗೆ ಸಹಾಯ ಮಾಡುತ್ತಿವೆ. ಕಳೆದ ದಶಕದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾದಂತೆ ವಿವಿಧ ಉದ್ದಿಮೆಗಳು, ರಾಜ್ಯ ಸರ್ಕಾರಗಳು ಸಿಪೆಟ್ ಎಕ್ಸ್‌ಟೆನ್ಷನ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿದವು. ಆ ಮೂಲಕ ಮೈಸೂರು, ಹೈದರಾಬಾದ್, ಅಹ್ಮದಾಬಾದ್, ಅಮೃತ್‌ಸರ್, ಭೂಪಾಲ್, ಭುವನೇಶ್ವರ್, ಲಕ್ನೊ, ಇಂಫಾಲ್‌ಗಳಲ್ಲಿ ಪ್ರಾಂತೀಯ ಕೇಂದ್ರಗಳನ್ನು ತೆರೆಯಲಾಯಿತು.

ಪ್ಲಾಸ್ಟಿಕ್ ಕ್ಷೇತ್ರಕ್ಕೆ ಸೇವೆಗಳನ್ನು ಕೊಡುವುದರೊಂದಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವುದು, ಸ್ವಂತ ಉದ್ದಿಮೆ ಸ್ಥಾಪಿಸುವ ಉತ್ಸಾಹಿಗಳನ್ನು ಅಭಿವೃದ್ಧಿಪಡಿಸಲು ಏರ್ಪಟ್ಟ ಸಿಫೆಟ್ ಮುಖ್ಯ ಲಕ್ಷ್ಯಗಳು...

  • ಪ್ಲಾಸ್ಟಿಕ್ ಕ್ಷೇತ್ರಕ್ಕೆ ಸುಶಿಕ್ಷಿತರನ್ನು ಒದಗಿಸುವುದು.
  • ಮುಂದುವರಿದ ಶಿಕ್ಷಣ ಕಾರ್ಯಕ್ರಮಗಳ ಮೂಲಕ ತಾಂತ್ರಿಕ ಪರಿಜ್ಞಾನವನ್ನು ನೀಡುವುದು.
  • ಪ್ಲಾಸ್ಟಿಕ್ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸುವುದು.
  • ಪ್ಲಾಸ್ಟಿಕ್ ವಸ್ತುಗಳು, ಮೂಸೆಗಳನ್ನು ತಯಾರಿಸುವುದು.
  • ತಾಂತ್ರಿಕ ವಿಷಯಗಳಲ್ಲಿ ಕನ್ಸಲ್ಟೆನ್ಸಿ ಸೇವೆಗಳನ್ನು ನೀಡುವುದು.
  • ಪ್ಲಾಸ್ಟಿಕ ಕ್ಷೇತ್ರ ಅಭಿವೃದ್ಧಿಗೆ ಕೃಷಿ ಮಾಡುವುದು.
ಇವಿಷ್ಟೇ ಅಲ್ಲದೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಬಂದ ಅಭ್ಯರ್ಥಿಗಳಿಗೆ ಸಿಪೆಟ್ ಶಿಕ್ಷಣ ನೀಡುತ್ತದೆ. ಆಯಾ ದೇಶಗಳಲ್ಲಿ ಪ್ಲಾಸ್ಟಿಕ್ ಉದ್ಯಮ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಸಂಸ್ಥೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಂಪ್ಯೂಟರ್ ಸೌಲಭ್ಯಗಳೊಂದಿಗೆ ಪ್ಲಾಸ್ಟಿಕ್ ಕ್ಷೇತ್ರದಲ್ಲಿ ಸಿಪೆಟ್ ಅತ್ಯಾಧುನಿಕವಾಗಿ ಮುನ್ನುಗ್ಗುತ್ತಿದೆ. ಸಿಪೆಟ್ ಕಾರ್ಯಕಲಾಪಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು.

ತಾಂತ್ರಿಕ ಸೇವೆಗಳು: ಪ್ಲಾಸ್ಟಿಕ್ ಪದಾರ್ಥಗಳನ್ನು, ಉತ್ಪತ್ತಿಗೆ ಸಂಬಂಧಿಸಿದ ವಸ್ತುಗಳನ್ನ, ಉಪಕರಣಗಳನ್ನು ವಿನ್ಯಾಸಗೊಳಿಸುವುದು, ವಿವಿಧ ರೂಪಗಳಲ್ಲಿ ಅವುಗಳನ್ನು ತಯಾರಿಸುವುದರೊಂದಿಗೆ ಪ್ಲಾಸ್ಟಿಕ್ ಪದಾರ್ಥಗಳ ನಾಣ್ಯತೆಯನ್ನು ಪರೀಕ್ಷಿಸುವುದು ತಾಂತ್ರಿಕ ಸೇವೆಗಳಲ್ಲಿ ಪ್ರಧಾನವಾದವು. ಇಂಡಿಯನ್ ಸ್ಟ್ಯಾಂಡರ್ಡ್ಸ್ ಬ್ಯೂರೊ ಸಿಪೆಟ್ ನಾಣ್ಯತೆಯನ್ನು ಗುರುತಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ: ಪ್ಲಾಸ್ಟಿಕ್ ಉದ್ಯಮಕ್ಕೆ ಅಗತ್ಯವಾದ ಮ್ಯಾನೇಜೇರಿಯಲ್, ಸೂಪರ್‌ವೈಸರಿ ಮಟ್ಟದ ಅಭ್ಯರ್ಥಿಗಳನ್ನು ಸಿಪೆಟ್ ಒದಗಿಸುತ್ತದೆ. ವಿವಿಧ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಸುಶಿಕ್ಷಿತರನ್ನು ತಯಾರಿಸುತ್ತದೆ. ಈ ಕಾರ್ಯಕ್ರಮಗಳಲ್ಲಿ ದೀರ್ಘಕಾಲದ, ಅಲ್ಪಕಾಲದ, ಟೆಯಿಲರ್ ಮೇಡ್ ಕಾರ್ಯಕ್ರಮಗಳೊಂದಿಗೆ ಸಂಜೆ ಕೋರ್ಸ್‌ಗಳು ಸಹ ಇವೆ. ಉದ್ಯಮದಲ್ಲಿರುವ ಅಭ್ಯರ್ಥಿಗಳ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಈ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದಾರೆ. ಆದರೆ ದೀರ್ಘಕಾಲದ ಕೋರ್ಸ್‌ಗಳು ಪ್ಲಾಸ್ಟಿಕ್, ಮತ್ತಿತರ ಉದ್ದಿಮೆಗಳಿಗೆ ನಿಪುಣರನ್ನು ಒದಗಿಸಲು ಉದ್ದಿಶಿಸಿದ ಕೋರ್ಸ್‌ಗಳು. ಅವುಗಳ ವಿವರಗಳು...

1. ಪ್ಲಾಸ್ಟಿಕ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮ(ಪಿ.ಜಿ.ಡಿ.ಪಿ.ಇ): ಈ ಕೋರ್ಸ್‌ನ ಕಾಲವಧಿ ಒಂದು ವರ್ಷ. ಅಭ್ಯರ್ಥಿಗಳ ವಯಸ್ಸು 26 ವರ್ಷಗಳನ್ನು ಮೀರಿರಬಾರದು. ಬಿ.ಇ/ಬಿ.ಟೆಕ್/ಬಿ.ಎಸ್‌ಸಿ ಇಂಜಿನಿಯರಿಂಗ್(ನಾಲ್ಕು ವರ್ಷಗಳು)(ಮೆಕಾನಿಕಲ್/ಕೆಮಿಕಲ್/ಪ್ರೊಡಕ್ಷನ್/ಪಾಲಿಮರ್/ಟೂಲ್ ಇಂಜಿನಿಯರಿಂಗ್) ಉತ್ತೀರ್ಣರಾಗಿರಬೇಕು. ಈ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಇಂಜಿನಿಯರಿಂಗ್‌ನಲ್ಲಿ ಪ್ರೊಡಕ್ಷನ್, ಪ್ರೊಸಸಿಂಗ್, ಡಿಸೈನ್ ವಿಭಾಗಗಳಲ್ಲಿ ಉದ್ಯೋಗವಕಾಶಗಳನ್ನು ಪಡೆಯಬಹುದು.

2. ಪ್ಲಾಸ್ಟಿಕ್ ಪ್ರಾಸೆಸಿಂಗ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮ(ಪಿಜಿಡಿ-ಪಿ.ಪಿ.ಟಿ): ಈ ಕೋರ್ಸ್‌ನ ಕಾಲಾವಧಿ ಒಂದು ವರ್ಷ. ರಸಾಯನಶಾಸ್ತ್ರ ಒಂದು ವಿಷಯವಾಗಿ ಬಿ.ಎಸ್‌ಸಿ ಉತ್ತೀರ್ಣರಾದ 24 ವರ್ಷಗಳ ವಯೋಮಿತಿಯ ಅಭ್ಯರ್ಥಿಗಳು ಅರ್ಹರು. ಈ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಾಸೆಸ್, ಟೂಲ್ ರೂಂಗಳಲ್ಲಿ ಸೂಪರ್‌ವೈಜರಿ, ಮಧ್ಯಮ ಸ್ಥಾಯಿ ಮ್ಯಾನೇಜ್‌ಮೆಂಟ್ ಉದ್ಯೋಗಗಳು ಲಭಿಸುತ್ತವೆ.

3. ಪ್ಲಾಸ್ಟಿಕ್ ಟೆಸ್ಟಿಂಗ್ ಮತ್ತು ಕನ್‌ವರ್ಷನ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮ(ಪಿಜಿಡಿ-ಪಿ.ಜಿ.ಸಿ.ಡಿ): ಕೋರ್ಸನ ಕಾಲಾವಧಿ ಒಂದು ವರ್ಷ. ಅಭ್ಯರ್ಥಿಗಳು 24 ವರ್ಷಗಳ ವಯೋಮಿತಿಯೊಳಗಿದ್ದು ರಸಾಯನಶಾಸ್ತ್ರ ಒಂದು ವಿಷಯವಾಗಿ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಈ ಕೋರ್ಸನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ಲಾಸ್ಟಿಕ್ ಉದ್ಯಮದಲ್ಲಿ ಟೆಸ್ಟಿಂಗ್ ಮತ್ತು ಕ್ವಾಲಿಟಿ ಕಂಟ್ರೋಲ್ ವಿಭಾಗಗಳಲ್ಲಿ ಸೂಪರ್‌ವೈಸರಿ ಸ್ಥಾಯಿ ಉದ್ಯೋಗಗಳು ಲಭಿಸುತ್ತವೆ.

4. ಪ್ಲಾಸ್ಟಿಕ್ ಕಂಪೋಸಿಂಗ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮ(ಪಿಜಿಡಿ-ಪಿಸಿಟಿ): ಒಂದು ವರ್ಷ ಕಾಲಾವಧಿಯ ಈ ಕೋರ್ಸನ್ನು ರಸಾಯನಶಾಸ್ತ್ರವನ್ನು ಒಂದು ವಿಷಯವಾಗಿ ಓದಿದ ವಿಜ್ಞಾನ ಪದವಿಧರರು ಅರ್ಹರು. ಅಭ್ಯರ್ಥಿಗಳ ವಯಸ್ಸು 24 ವರ್ಷಗಳನ್ನು ಮೀರಿರಬಾರದು.

5. ಪ್ಲಾಸ್ಟಿಕ್ ಮೌಲ್ಡ್ ಡಿಸೈನ್‍ನಲ್ಲಿ ಸ್ನಾತಕೋತ್ತರ ಡಿಪ್ಲೊಮ(ಪಿಡಿ-ಪಿಎಂಡಿ): ಇದು ಒಂದು ವರ್ಷ ಕಾಲಾವಧಿಯ ಕೋರ್ಸ್. ಅಭ್ಯರ್ಥಿಗಳ ವಯಸ್ಸು 24 ವರ್ಷಗಳನ್ನು ಮೀರಿರಬಾರದು. ಮೆಕಾನಿಕಲ್/ಪ್ಲಾಸ್ಟಿಕ್ ಟೆಕ್ನಾಲಜಿ/ಟೂಲ್ ಇಂಜಿನಿಯರಿಂಗ್/ಪ್ಲಾಸ್ಟಿಕ್ ಇಂಜಿನಿಯರಿಂಗ್/ ಪ್ರೊಡಕ್ಷನ್ ಇಂಜಿನಿಯರಿಂಗ್/ಸಿಪೆಟ್-ಡಿಪಿಎಂಟಿ ಮಾಡಿದ ಅಭ್ಯರ್ಥಿಗಳು ಅರ್ಹರು. ಕೋರ್ಸು ಪೂರ್ಣ ಮಾಡಿದ ಅಭ್ಯರ್ಥಿಗಳಿಗೆ ಅಚ್ಚು ವಿನ್ಯಾಸಗೊಳಿಸುವ(ಮೌಲ್ಡ್ ಡಿಸೈನ್) ವಿಭಾಗಗಳಲ್ಲಿಸ ಸೂಪರ್‌ವೈಸರ್ ಸ್ಥಾಯಿ ಉದ್ಯೋಗಗಳು ಲಭಿಸುತ್ತವೆ.

6. ಮೆಷಿನ್ ಮೆಯಿಂಟೆನೆನ್ಸ್‌ನಲ್ಲಿ ಪೋಸ್ಟ್ ಡಿಪ್ಲೊಮ(ಪಿಡಿ-ಎಂಎಂ): ಇದು ಸಹ ಒಂದು ವರ್ಷ ಕಾಲಾವಧಿಯ ಕೋರ್ಸ್. ಅಭ್ಯರ್ಥಿಗಳ ವಯಸ್ಸು 24 ವರ್ಷಗಳನ್ನು ಮೀರಿರಬಾರದು. ಮೆಕಾನಿಕಲ್/ಎಲಕ್ಟ್ರಿಕಲ್/ಎಲಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಅಥವಾ ಸಿಪೆಟ್‌ನಲ್ಲಿ ಡಿಪಿಎಂಟಿ ಮಾಡಿದ ಅಭ್ಯರ್ಥಿಗಳು ಅರ್ಹರು. ಮೆಯಿಂಟೆನೆನ್ಸ್ ವಿಭಾಗಗಳಲ್ಲಿ ಈ ಪದವಿ ಪಡೆದ ಅಭ್ಯರ್ಥಿಗಳಿಗೆ ಸೂಪರ್‌ವೈಸರಿ ಉದ್ಯೋಗಗಳು ಲಭಿಸುತ್ತವೆ.

7. ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿಯಲ್ಲಿ ಪೋಸ್ಟ್ ಡಿಪ್ಲೊಮ(ಡಿಪಿಎಂಟಿ): ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ, ವಯಸ್ಸು 18ವರ್ಷ ಮೀರದ ಅಭ್ಯರ್ಥಿಗಳು ಅರ್ಹರು. ಕಾಲಾವಧಿ ಮೂರು ವರ್ಷಗಳುಸ.

8. ಡಿಪ್ಲೊಮ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಮೇಕಿಂಗ್ ಟೆಕ್ನಿಷಿಯನ್ಸ್(ಡಿಪಿಎಂಎಂ-ಟಿ): ಟರ್ನಿಂ/ಫಿಟ್ಟಿಂಗ್/ಮೆಕಾನಿಸ್ಟ್ ಟ್ರೇಡ್‌ಗಳಲ್ಲಿ ಐಟಿಐ ಮಾಡಿದ ಅಭ್ಯರ್ಥಿಗಳು ಅರ್ಹರು. ಈ ಕೋರ್ಸ್‌ನ ಕಾಲಾವಧಿ ಎರಡು ವರ್ಷಗಳು. ಅಭ್ಯರ್ಥಿಗಳು ವಯಸ್ಸು 22 ವರ್ಷ ಮೀರಿರಬಾರದು.

7,8 ಕೋರ್ಸ್‌‍ಗಳನ್ನು ಮಾಡಿದವರು ಟೋಲ್ ರೂಂಗಳಲ್ಲಿ ಆಪರೇಟರ್ಸ್‌ಗಳಾಗಿ ಕೆಲಸ ಮಾಡಬಹುದು. ಪಿಜಿ ಡಿಪ್ಲೊಮ ಪಡೆದ ಅಭ್ಯರ್ಥಿಗಳು(ಇಂಜಿನಿಯರಿಂಗ್ ಅಭ್ಯರ್ಥಿಗಳಾದರೆ) ಆರಂಭದಲ್ಲೇ ಉತ್ತಮ ವೇತನ ದೊರೆಯುತ್ತದೆ. ಸಾಧಾರಣ ಪದವಿಯೊಂದಿಗೆ ಪಿಜಿ ಡಿಪ್ಲೊಮ ಪಡೆದ ಅಭ್ಯರ್ಥಿಗಳಿಗೂ ಉತ್ತಮ ವೇತನ ಸಿಗುತ್ತದೆ. ಆಪರೇಟರ್‌ಗಳಿಗೆ ಆರಂಭದಲ್ಲ5 ಸಾವಿರ ರೂ.ಗಳ ವರೆಗೂ ಸಿಗುತ್ತದೆ. ಸಿಪೆಟ್ ನೀಡುವ ಪದವಿ, ಡಿಪ್ಲೊಮಗಳನ್ನು ಉದ್ದಿಮೆಗಳು,ಎಲ್ಲಾ ಶಿಕ್ಷಣ ಸಚಿವಾಲಯಗಳು ಮಾನ್ಯತೆ ನೀಡಿವೆ.

ದೇಶದಾದ್ಯಂತ ನಡೆಯುವ ಪ್ರವೇಶ ಪರೀಕ್ಷೆಯ ಮೂಲಕ ಈ ಮೇಲಿನ ಕೋರ್ಸ್‌ಗಳಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳ ‍ಪಡೆದ ಅಂಕಗಳನ್ನು ಆಧರಿಸಿ ವಿವಿಧ ಕೇಂದ್ರಗಳಲ್ಲಿ ಭರ್ತಿ ಮಾಡುತ್ತಾರೆ. ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವಸತಿನಿಲಯದ ಸೌಲಭ್ಯವಿರುತ್ತದೆ. ಹೆಚ್ಚು ಮಂದಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವುದೇ ಸಿಪೆಟ್‌ನ ಮುಖ್ಯ ಉದ್ದೇಶ.

ಸಣ್ಣ ಉದ್ದಿಮೆಯನ್ನು ಸ್ಥಾಪಿಸಬೇಕು ಎಂಬ ಅಭ್ಯರ್ಥಿಗಳಿಗೆ ಪ್ಪಾಸ್ಟಿಕ್ ಕ್ಷೇತ್ರ ಸೂಕ್ತವಾದುದು. ಸಿಪೆಟ್‌ನಲ್ಲಿ ಓದುತ್ತಿರುವ ಬಹುಪಾಲು ವಿದ್ಯಾರ್ಥಿಗಳ ಲಕ್ಷ್ಯವೂ ಪ್ಲಾಸ್ಟಿಕ್ ಕ್ಷೇತ್ರದಲ್ಲಿ ಸಣ್ಣ ಉದ್ದಿಮೆಯನ್ನು ಸ್ಥಾಪಿಸಬೇಕು ಎನ್ನುವುದೇ ಆಗಿದೆ. ಇಂದು ನಾವು ಮಲಗುವ ಹಾಸಿಕೆಯಿಂದ ಪಾದರಕ್ಷೆಗಳ ತನಕ ಪ್ಲಾಸ್ಟಿಕ್ ಆಕ್ರಮಿಸಿದೆ. ರಸಾಯನಶಾಸ್ತ್ರ ಅಂದ್ರೆ ಇಷ್ಟಪಡುವ ವಿದ್ಯಾರ್ಥಿಗಳಿಗೆ ಸಿಪೆಟ್ ಕೋರ್ಸ್‌ಗಳು ಅವರ ಜೀವನಪಥವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯುತ್ತವೆ. ಇಂದು ತಂತ್ರಜ್ಞಾನ ತನ್ನ ಬಾಹುಗಳನ್ನು ವಿಸ್ತರಿಸುತ್ತಿದೆ. ಪದವಿ ಪಡೆದ ಅಭ್ಯರ್ಥಿಗಳು ತಮ್ಮ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ವಿಶಿಷ್ಟ ಕೋರ್ಸ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆ ಮೂಲಕ ಉತ್ತಮ ಉದ್ಯೋಗವಕಾಶಗಳನ್ನು ಪಡೆಯಬಹುದು ಎಂಬುದು ಈ ಕಾಲದ ಯುವಕರ ಮನೋಭಿಲಾಶೆ. ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಿಪೆಟ್‌ನಂತಹ ಸ್ವತಂತ್ರ ಸಂಸ್ಥೆಗಳು ಯುವಕರ ಆಸೆಆಕಾಂಕ್ಷೆಗಳನ್ನು ಈಡೇರಿಸುತ್ತಿವೆ. ಈ ಸಂಸ್ಥೆಯಿಂದ ಹೊರಬಂದ ಪದವಿಧರರಿಗೆ ಉದ್ಯೋಗ ಹುಡುಕುವ ಕಷ್ಟ ಇಲ್ಲ. ಉದ್ಯೋಗವೆ ಇವರನ್ನು ಹುಡುಕಿಕೊಂಡು ಬರುತ್ತದೆ!

ಚೆನ್ನೈ ಪ್ರಧಾನ ಕೇಂದ್ರದ ವಿಳಾಸ: The Chief Manager, (Trg & P/T), corporate office, CIPET, Guindy, Chennai-600 032, Tamilnadu.

ಮೈಸೂರು ಹಾಗೂ ಇತರ ಪ್ರಾಂತೀಯ ಕಚೇರಿಗಳ ವಿಳಾಸ:
DEPUTY DIRECTOR
CIPET
437/A Hebbal Industrial Estate
Mysore - 570 016
Email : cipetmys@sancharnet.in
Tel : +91-821-2510618, 2510349
Fax : +91-821- 2510990

1.AHMEDABAD
CIPET
Plot No.630, Phase - IV
GIDC, Vatva
Ahmedabad - 382 445
Email : cipetad1@sancharnet.in
Tel : +91-79- 25830569 ,25835219
Fax : +91-79 - 25835236

2.AMRITSAR
P.O. Rayon & Silk Mills
Adjacent to GND University
Amritsar - 143 104
Email : cipet@jla.vsnl.net.in
Tel : +91-183 - 2256602 , 2258938
Fax :+91-183-2258671

3.AURANGABAD
Plot No.1-B/1 (Meltron Building),
MIDC Industrial Area,
Chikalthana, Jalna Road,
Aurangabad 431 210.
Maharashtra
Email : cipet_abd@rediffmail.com
Tel : +91-240-3206636
Fax : +91-240-2476626

4.BHOPAL
Sector "G" Govindpura Indl. Area
Bhopal - 462 023
Email :cipet@mp.nic.in
Tel : +91-755 - 2687454, 2688288
Fax :+91-755 - 2689041

5.BHUBANESWAR

B-25, CNI Complex
PO: Patia
Bhubaneswar - 751 024
Email : cipet_bbsr@sify.com
Tel : +91-674 - 2743462, 2743767
Fax :+91-674-274386

6.GUWAHATI
P.O. Changsari
Kamrup - 781 101
Email : cipet_ghy@rediffmail.com
Tel : +91-361-2680622, 2680747
Fax :+91-361-2680281

7.HALDIA
City Centre, PO: Debhog
Dist. Purba Medinipur
Haldia - 721 657
Email : cipethaldia@dataone.in (or) cipeth@sancharnet.in
Tel : +91-3224-255404, 255444, 255533
Fax :+91-3224-253016

8.HAJIPUR

EPIP Complex
Hajipur Industrial Area
Hajipur - 844 101
Email : cipetpat@sancharnet.in
Tel : +91-6224-277424, 273515,
Fax: +91-6224-275316

9.HYDERABAD
PB-3, CIDA
Phase - II, HCL Post
Hyderabad – 500 051
Email : cipethyd@satyam.net.in
Tel : +91-40-27263750, 27264043, 27263615
Fax :+91-40-27264051
10.IMPHAL
C-12, Industrial Estate
Takyelpat
Imphal – 795 001.
Email : cipetim@sancharnet.in
Tel : +91-385-2449158
Fax :+91-385-2452870

11.JAIPUR
H 1045-48,
Sitapura Industrial Area,
Phase – III Tonk Road,
JAIPUR 302 022
Email : cipet_jaipur@yahoo.co.in
Tel : +91-141-3239784
Telefax : +91-141-2770736
12.LUCKNOW
B-27, Amausi Industrial Area
Lucknow – 226 008
Email : cipetlko@satyam.net.in
Tel : +91-522-2436910, 2437647
Fax : +91-522-2436227

13.PANIPAT
G.T. Road, Sewah Village,
PANIPAT 132 103
Email : cipetpanipat@yahoo.co.in
Tel : +91-180-3297993
Fax : +91-180-2565097

No comments: