Monday, May 5, 2008

How to Become a Tattoo Artist

ನೀನೇ ನೀನೆ ಮೈಯಲ್ಲಾ ನೀನೆ!!
ನಗರದ ತಾಜಾ ಖಯಾಲಿ... ಟಾಟೂಗಳು. ಅಲ್ಲಿ ಇಲ್ಲಿ ಎಂದೇನು ಇಲ್ಲ. ದೇಹದ ಯಾವುದೇ ಭಾಗದ ಮೇಲೆ, ಮನಸಿಗೆ ಒಪ್ಪುವ ಆಕೃತಿಯಲ್ಲಿ ಚುಚ್ಚಿಸಿಕೊಳ್ಳುವುದನ್ನೇ ಟಾಟೂಗಳು ಎನ್ನುತ್ತಾರೆ. ಯುವಕರ ಮೂಲಕ ಮೊದಲಾದಟಾಟೂ ಸಂಸ್ಕೃತಿ ಪ್ರಸ್ತುತ ವಯಸು, ಲಿಂಗಭೇದವಿಲ್ಲದೆ ಎಲ್ಲ ಕಡೆಗೂ ಕೈಗಳನ್ನು ಚಾಚಿದೆ. ಕಟ್ಟಕಡಗೆ ಇದೊಂದುಜೀವನಪಥವಾಗಿಯೂ ಬದಲ ಾಗಿದೆ. ಹಿಂದೆ ಇದು ಜೀವನೋಪಾಯದ ಮಾರ್ಗವಾಗಿರಲಿಲ್ಲ ಎಂದಲ್ಲ. ಆಗಲೂಇತ್ತು. ಆದರೆ ಈಗ ಇದು ಆಧುನಿಕವಾಗಿ ಬದಲಾಗಿ ಮೈ ಕೈಗಳಿಗೆ ಅಂಟಿಕೊಂಡಿದೆ. ಇನ್ನೂ ಸ್ನಾತಕ, ಸ್ನಾತಕೋತ್ತರ, ಪಿಎಚ್ಡಿ ಪದವಿ ಹಾಳುಮೂಳು ಅಂತ ಶುರುವಾಗಿಲ್ಲ.ಆದರೆ ಶಿಕ್ಷಣ ಸಂಸ್ಥೆಗಳು ಮಾತ್ರನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಿವೆ. ವಿದ್ಯೆಯಲ್ಲಿ ನೈಪುಣ್ಯತೆ ಸಾಧಿಸಿದರೆ...ನಾಲ್ಕು ಜನಕ್ಕೆ ಹಚ್ಚೆಹಾಕುತ್ತಾ, ಹತ್ತು ಮಂದಿಗೆ ಕಲಿತ ವಿದ್ಯೆಯನ್ನು ಕಲಿಸುತ್ತಾ ವೃತ್ತಿ ಜೀವನ ಆರಂಭಿಸಬಹುದು. ಪಥದಲ್ಲೇ ಎಷ್ಟುವರ್ಷ ನಡೆಯುತ್ತಾರೆ ಎನ್ನುವುದು ಅಭ್ಯರ್ಥಿಗಳ ಆಸಕ್ತಿ, ಸಹನೆ, ಹಚ್ಚೆಯ ಕುರಿತು ಜನರಲ್ಲಿರುವ ಇಷ್ಟಕಷ್ಟಗಳನ್ನುಅನುಸರಿಸಿ ಇರುತ್ತದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ, ಮುಖ್ಯವಾಗಿ ಸಭೆ-ಸಮಾರಂಭಗಳಿಗೆ ಹೆಸರುವಾಸಿಯಾದನಗರಗಳಲ್ಲಿ ಹಚ್ಚೆ ನಿಪುಣರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೆಚ್ಚಿನ ಮಂದಿ ಹಚ್ಚೆ ಹಾಕುವ ವೃತ್ತಿಯನ್ನು ಹೆಚ್ಚುವರಿಆದಾಯದ ಮಾರ್ಗವಾಗಿ ಭಾವಿಸುತ್ತಿದ್ದಾರೆ. ಹಾಗೆಂದು ತೀರಾ ಭದ್ರತೆ ಇಲ್ಲದ ವೃತ್ತಿ ಎಂದೇನೂ ಅಲ್ಲ! ಟಾಟೂಕ್ಷೇತ್ರದಲ್ಲಿನ ಹಿನ್ನಲೆ, ಅನುಭಾವದೊಂದಿಗೆ ಗ್ರಾಫಿಕ್ ಡಿಜೈನಿಂಗ್, ಇಲಸ್ಟ್ರೇಷನ್, ಚಿತ್ರಕಲೆ ಕ್ಷೇತ್ರಗಳಲ್ಲಿ ಒಂದಷ್ಟುಆಸಕ್ತಿ ಇದ್ದರ ಕ್ಷೇತ್ರಕ್ಕೆ ಪ್ರವೇಶ ಪಡೆಯುವುದು ಇನ್ನೂ ಸುಲಭ.


ಮನುಷ್ಯ ಬೇಕೆಂದುಕೊಂಡ ಆಕೃತಿಯಲ್ಲಿ ಕೆಲವೊಂದುಯಂತ್ರಗಳು, ಸೂಜಿಗಳ ಸಹಾಯದೊಂದಿಗೆ ಶರೀರದ ಮೇಲೆ( ಚರ್ಮದ ಮೇಲೆ) ಚುಚ್ಚಿವ ಹಸಿರುಚುಕ ್ಕೆಗಳನ್ನೇ ಟಾಟೂಗಳುಎನ್ನುತ್ತಾರೆ. ಸಾಂಕೇತಿಕ ಭಾಷೆಯಲ್ಲಿ ಇದನ್ನು Dermal Pigmentation ಎಂದು ಕರೆಯುತ್ತಾರೆ. 'ಟಾಟೂ'(tattoo) ಎನ್ನುವ ಪದ ಸಮೋಯ ಭಾಷೆಗೆ ಸೇರಿದ್ದು. ಅಮೆರಿಕ,ಆಸ್ಟ್ರೇಲಿಯಾ, ನ್ಯೂಜಿಲಾಂಡ್ನಲ್ಲಿನ ಕೆಲವೊಂದು ದ್ವೀಪಗಳಲ್ಲಿ ಭಾಷೆಯನ್ನು ಮಾತನಾಡುತ್ತಾರೆ. ಒಂದುಪ್ರದೇಶಗಳಲ್ಲಿ ಇಂಗ್ಲಿಷ್ನೊಂದಿಗೆ ಭಾಷೆಗೆ ಅಧಿಕಾರಿಕಮಾನ್ಯತೆ ಇದೆ. 'ಟಾಟು' ಎಂದರೆ ಅರ್ಥ 'ಮಚ್ದೆ'ಎಂದು. ಎರಡುಸಲ ಬರೆಯುವುದು ಎಂಬರ್ಥವೂ ಇದೆ. ನಗರಗಳಲ್ಲಿ ಇದನ್ನು ಈಗೇನೋ ಹೊಸದಾಗಿ, ವಿಚಿತ್ರವಾಗಿ ನೋಡುತ್ತಿದ್ದಾರಾದರೂನಿಜಕ್ಕೂ ಟಾಟೂಗಳು ಈಗಿನವಲ್ಲ. ಕ್ರಿ.ಪೂದ ನವ ಶಿಲಾಯುಗದಲ್ಲಿ ಈಜಿಫ್ಟ್ನಲ್ಲಿ ಟಾಟೂ ಸಂಸ್ಕೃತಿ ಚೆನ್ನಾಗಿ ಹಬ್ಬಿತ್ತು. ನಂತರಕೆಲವೊಂದು ಶತಮಾನಗಳಲ್ಲಿ ಪ್ರಪಂಚದಾದ್ಯಂತ ವಿಸ್ತರಿಸಿತು. ಮಧ್ಯದಲ್ಲಿ ಕಣ್ಮರೆಯಾಗಿ ಈಗ ಮತ್ತೆ ನಗರ ಯುವಜನತೆಯನ್ನುಹೆಚ್ಚಾಗಿ ಆಕರ್ಷಿಸುತ್ತಿದೆ.

ಆರಂಭದಲ್ಲಿ ಟಾಟೂಗಳು ಕೈ ಮತ್ತು ಭುಜಗಳಿಗೆ ಮಾತ್ರ
‌ ‌ ಸೀಮಿತವಾಗಿತ್ತು. ತಮಗೆ ಇಷ್ಟವಾದ ನಾಮಧೇಯಗಳು ಕೂಡಿಬರುವಂತಅಕ್ಷರಗಳು, ಇಲ್ಲದಿದ್ದರೆ ದೇವರ ಚಿತ್ರಗಳು, ಹೆಸರುಗಳನ್ನು ಹಚ್ಚೆ ಹಾಕಿಸ ಿಕೊಳ್ಳುತ್ತಿದ್ದರು. ಬಸ್ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿಹೆಚ್ಚಾಗಿ ಟಾಟೂ 'ನಿಪುಣ'ರು ಹೆಚ್ಚಾಗಿ ಕಾಣಿಸುತ್ತಿದ್ದರು. ನಗರದ ಯುವಜನತೆಯಲ್ಲಿ ಇವುಗಳ ಬಗ್ಗೆ ಆಕರ್ಷಣೆ ಬೆಳೆದು, ಆರ್ಥಿಕ, ಸಾಂಸ್ಕೃತಿಕ ಉನ್ನತಿಗೆ ಸೂಚಕಪ್ರಾಯವಾಗಿ ಕೆಲಮಂದಿ ಭಾವಿಸುತ್ತಿರುವ ಕಾರಣ ಈಗ ದೊಡ್ಡ ದೊಡ್ಡ ಕಟ್ಟಡಗಳಿಗೆ, ಹವಾನಿಯಂತ್ರಿಕ ಕೊಠಡಿಗಳಿಗೆ ಟಾಟೂ ವ್ಯಾಪಾರ ತನ್ನ ಹಸ್ತಗಳನ್ನು ವಿಸ್ತರಿಸಿದೆ. ಸ್ವಲ್ಪ ಹೆಸರು ಮಾಡಿದ ನಿಪುಣರು ಅಥವಾಸಂಸ್ಥೆಯೊಂದರ ಮೂಲಕ ಟಾಟೂ ಹಾಕಿಸಿಕೊಳ್ಳಬೇಕೆಂದರೆ ಕನಿಷ್ಟ ರೂ.10,000 ದಿಂದ ರೂ.15,000ವರೆಗೂ ಖರ್ಚಾಗುತ್ತದೆ. ಒಂದು ಟಾಟೂ ಹಾಕಲು ಹೂಡಬೇಕಾದ ಬಂಡವಾಳ ರೂ.5,000 ಆಜೂಬಾಜೂ ದಾಟುವುದಿಲ್ಲ. ಹೇಗಿದೆ ಲಾಭದಾಯವ್ಯಾಪಾರ ಅನ್ನುವುದನ್ನು ಸುಲಭವಾಗಿ ನೀವೇ ಅರ್ಥೈಸಿಕೊಳ್ಳಬಹುದು.

ಈ ಸಾಮರ್ಥ್ಯಗಳು ನಿಮ್ಮಲ್ಲಿ ಇರಲೇ ಬೇಕು!
  • ಟಾಟೂ ಕಲಾವಿದ, ಟಾಟೂ ಡಿಸೈನರ್ಗೆ ಎಲ್ಲದಕ್ಕಿಂತಲೂ ಮುಖ್ಯವಾಗಿ ಕಲಾತ್ಮಕ ದೃಷ್ಟಿಕೋನ ಅವಶ್ಯಕ. ಕೆರೀರ್ನಲ್ಲಿಪ್ರವೇಶಿಸಬೇಕಾದರೆ,‌‌ ವಿಜಯಪಥ ಮೆಟ್ಟಿನಿಲ್ಲಬೇಕಾದರೆ ಇದು ಅತ್ಯವಶ್ಯಕವಾಗಿ ಬೇಕೇ ಬೇಕು.
  • ಟಾಟೂ ಯಂತ್ರವನ್ನು ಉಪಯೋಗಿಸುವುದರಲ್ಲಿ ಕೈ ಪಳಗಿರಬೇಕು. ಯಂತ್ರವನ್ನು 'ಟಾಟೂ ಗನ್' ಎನ್ನುತ್ತಾರೆ. ಇದರೊಂದಿಗೆ ಸೂಜಿಗಳು, ಇತರೆ ಸೂಕ್ಷ್ಮ ಪರಿಕರಗಳನ್ನು ಕರತಲಾಮಲಕವಾಗಿ ಬಳಸುವುದು ಹೇಗೆ ಎಂದುಗೊತ್ತಿರಬೇಕು.
  • ಟಾಟೂ ಹಾಕಬೇಕಾದಾಗ ತೆಗೆದುಕೊಳ್ಳುವ ಜಾಗ್ರತೆಗಳನ್ನು ತಿಳಿದುಕೊಂಡಿರಬೇಕು. ಮುಖ್ಯವಾಗಿ ಒಬ್ಬರಿಂದಮತ್ತೊಬ್ಬರಿಗೆ ಅಂಟು ಜಾಡ್ಯಗಳು ವ್ಯಾಪಿಸದ ಹಾಗೆ ಜಾಗ್ರತ್ತೆ ವಹಿಸಬೇಕು.
  • ಎಲ್ಲದಕ್ಕಿಂತ ಮುಖ್ಯವಾಗಿ ಇತರೆ ಖಾಸಗಿ ವೃತ್ತಿಗಳ ಹಾಗೆ ಅಂಕಿತ ಭಾವ, ಕಲಿಯ ಬೇಕೆಂಬ ಆಸಕ್ತಿ ಇರಬೇಕು. ಬೇಸರಿಸಿಕೊಳ್ಳದೆ ಗಂಟೆಗಳ ಕಾಲ ಸಾಧನೆ ಮಾಡಬೇಕು.
  • ಗ್ರಾಹಕರ ಅಭಿರುಚಿಯನ್ನುತಿಳಿದುಕೊಳ್ಳುವಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಬೇಕು. ಗ್ರಾಹಕರು ಒಪ್ಪುವ ವಿನ್ಯಾಸವನ್ನುಮಾಡಿಕೊಡಬೇಕು.

ವಿದೇಶಗಳೂ ಬಾಗಿಲು ತೆಗೆದಿವೆ...
ಟಾಟೂ ನಿಪುಣರಿಗೆ ಅಮೆರಿಕದಲ್ಲಿ ಉತ್ತಮ ಅವಕಾಶಗಳಿವೆ. ಫ್ಯಾಷನ್, ಸಿನಿಮಾ ಕ್ಷೇತ್ರಗಳ ಪ್ರಭಾವ ಸಾಧಾರಣ ಸಮಾಜದಮೇಲೆ ಹೆಚ್ಚಾಗುವ ಹಾಗೆ ಕೆರೀರ್ನಲ್ಲಿ ಅವಕಾಶಗಳುಬೆಳೆಯುತ್ತಿವೆ. ಇನ್ನೂ ನಮ್ಮ ಮನೆಯಂಗಳಕ್ಕೆ ಬಂದಿಲ್ಲವಾದರೂ, ಅಮೆರಿಕದಲ್ಲಿ ಟಾಟೂ ಕಲಾವಿದರಿಗೆ, ವಿನ್ಯಾಸಕರಿಗೆಸಂಘಟನೆಗಳು ಸಹ ಹುಟ್ಟಿಕೊಂಡಿವೆ. ಅಲ್ಲಿ ಸರಿಸುಮಾರು ಹತ್ತುಸಾವಿರಕ್ಕೂ ಹೆಚ್ಚು ಟಾಟೂ ನಿಪುಣರಿದ್ದಾರೆ. ಇತರ ಉದ್ಯೋಗಗಳರೀತಿಯಲ್ಲೇ ಉತ್ತಮ ಪೈಪೋಟಿಯಿಂದ ಕೂಡಿದ ವೃತ್ತಿ. ಐದುವರ್ಷಗಳಿಗೂ ಅಧಿಕ ಟಾಟೂ ಕಾಲ ವೃತ್ತಿಯಲ್ಲಿ ಮುಂದುವರಿದರೆಅವರು ನಿಜಕ್ಕೂ ವೃತ್ತಿಪರರು. ಕೆಲವೊಂದು ದೇಶಗಳಲ್ಲಿ ಟಾಟೂವೃತ್ತಿಯನ್ನು ಪ್ರಾರಂಭಿಸಬೇಕಾದರೆ ದೇಶಗಳ ಅನುಮತಿಯೂ ಬೇಕಂತೆ.


ಟಾಟೂ ಸಂಸ್ಕೃತಿ ಎಷ್ಟು ಹೆಚ್ಚಾಗಿ ವಿಸ್ತರಿಸುತ್ತೋ ಕೆರೀರ್ ಭವಿಷ್ಯ ಅಷ್ಟು ಭದ್ರವಾಗಿ ತಳವೂರುತ್ತದೆ. ಹಾಗೆಯೇ ಅವಕಾಶಗಳುಬೆಳೆಯುತ್ತಿರುತ್ತವೆ. ಸ್ಪರ್ಧಾಮನೋಭಾವ ಸಹ ಹೆಚ್ಚಾಗುತ್ತದೆ. ಪ್ರಸ್ತುತ ಬಹಳಷ್ಟು ಮಂದಿ ಒಂದು ಟಾಟೂಗೆ ಸೀಮಿತವಾಗುತ್ತಿಲ್ಲ. ಎರಡು, ಮೂರು ಪ್ರದೇಶಗಳಲ್ಲಿ ಟಾಟೂಗಳನ್ನು ಹಾಕಿಸಿಕೊಳ್ಳುವುದು ಮಾಮೂಲಾಗಿದೆ. ಮುಖ್ಯವಾಗಿ ತಾತ್ಕಾಲಿಕ ಟಾಟೂಗಳಿಗೆಬೇಡಿಕೆ ಹೆಚ್ಚಾಗುತ್ತಿದೆ. ಅವರಿಗೆ ಬೇಡವೆಂದಾಗ ಇವನ್ನು ತೆಗೆಸಿ ಹಾಕಬಹುದು. ಸಿನಿಮಾ, ಧಾರಾವಾಹಿಗಳಲ್ಲಿ ಇವುಗಳ ಬಳಕೆಹೆಚ್ಚಾಗಿರುತ್ತದೆ. ಇದರಿಂದ ಪ್ರಯೋಗಾತ್ಮಕವಾಗಿ ವಿಧವಿಧವಾದ ಟಾಟೂಗಳನ್ನು ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕೋರ್ಸ್‌ಗಳು ವಗೈರಾ ಏನಾದರೂ ಇದ್ದಾವಾ?
  1. ಟಾಟೂ ಹಾಕಲು ಕಲಿಯಲು ಪ್ರಸ್ತುತ ವಿಶೇಷವಾದ ಕೋರ್ಸ್ಗಳೇನು ಇಲ್ಲ. ಕೆರಿಯರ್ನಲ್ಲಿ ಪ್ರವೇಶಿಸಲು ವಿಶೇಷವಾಗಿಯಾವುದೇ ವಿದ್ಯಾರ್ಹತೆಯ ಅವಶ್ಯಕತೆಯೂ ಬೇಕಾಗಿಲ್ಲ.‌‌
  2. ಕಲೆಯ ಬಗ್ಗೆ ಅಭಿರುಚಿ, ಹಿನ್ನಲೆ ಇದ್ದರೆ ಸಾಕು. ಹೆಚ್ಚಿನ ಮಂದಿ ವೈಯಕ್ತಿಯ ಪರಿಚಯ, ನೆಟ್ವರ್ಕ್ ಮೂಲಕವೇ ಇಲ್ಲಿಗೆಪ್ರವೇಶ ಪಡೆಯುತ್ತಾರೆ.

ಸಾಧಾರಣವಾಗಿ ಟಾಟೂಗಳನ್ನು ಹಾಕುವ ಸಂಸ್ಥೆಗಳೇ ಶಿಕ್ಷಣವನ್ನೂ ಕೊಡುತ್ತಿವೆ. ಶಿಕ್ಷಣದ ಕಾಲಾವಧಿ ಆರು ತಿಂಗಳ ವರೆಗೂಇರುತ್ತದೆ. ಇದರಲ್ಲಿ ತಾತ್ಕಾಲಿಕ ಟಾಟೂಯಿಂಗ್ ಶಿಕ್ಷಣ, ಶಾಶ್ವತವಾಗಿರುವ ಟಾಟೂಗಳನ್ನು ಹಾಕುವ ವಿಧಗಳಿವೆ. ಸಂಸ್ಥೆಯಲ್ಲಿಶಿಕ್ಷಣ ಪಡೆಯಲು ಸಾಧ್ಯವಾಗದಿದ್ದರೆ ಚೆನ್ನಾಗಿ ಟಾಟೂಗಳನ್ನು ಹಾಕುವ ನಿಪುಣರ ಬಳಿ ಅಪ್ರೆಂಟಿಸ್ಗಳಾಗಿ ಸ್ವಲ್ಪ ಕಾಲ ಕೆಲಸಮಾಡಿ ನಂತರ ಸ್ವತಂತ್ರವಾಗಿ ಮುನ್ನುಗ್ಗಬಹುದು. ಡ್ರಾಯಿಂಗ್ನಲ್ಲಿ ನೈಪುಣ್ಯತೆ ಇದ್ದರೆ ಕೆಲಸ ಸ್ವಲ್ಪ ಸುಲಭವಾಗುತ್ತದೆ. ಚಿತ್ರಕಲೆ, ಡಿಸೈನಿಂಗ್ ನಲ್ಲಿ ಅನುಭವವಿದ್ದರೆ ಟಾಟೂ ವೃತ್ತಿಯಲ್ಲಿ ಸುಲಭವಾಗಿ ಬೆರೆತುಹೋಗುತ್ತೀರಿ.

‌ ‌ ಹೀಗೊಂದಿಷ್ಟು ಸಂಸ್ಥೆಗಳು:
  • ಸಿಟಿ ಸ್ಕ್ವೇರ್ ಮಾಲ್, ರಾಜೌರಿ ಗಾರ್ಡನ್, ನವದೆಹಲಿ
  • ಆರ್ಯನ್ಸ್ ಟಾಟೂಸ್, ಅಹಮದಾಬಾದ್
  • ಗೋಲ್ಡ್ ಟಚ್ ಟಾಟೂ ಸ್ಟುಡಿಯೋ, ಇಂದಿರಾನಗರ್, ಬೆಂಗಳೂರು
  • ಕೆ.ಡಿ.ಝಡ್ ಟಾಟೂಸ್, ಜನಕ್ ಪುರಿ, ನವದೆಹಲಿ
  • ಸ್ಕೀಸ್ ಡೀಪ್, ಇಂದಿರಾನರಗ, ಬೆಂಗಳೂರು
  • ರಾಸ್ ಟಾಟೂಸ್,ಮೋತಿನಗರ, ನವದೆಹಲಿ
  • ಬಾಡಿ ಎಫ್.ಎಕ್ಸ್.ಟಾಟೂ ಸ್ಟುಡಿಯೋ, ಈಸ್ಟ್ ಪಟೇಲ್ ನಗರ, ನವದೆಹಲಿ
  • ಪ್ರಧಾನ್ ಸ್ಟುಡಿಯೋ, ಎಸ್.ವಿ.ಸಿಂಗ್ ರೋಡ್, ಡಾರ್ಜಿಲಿಂಗ್
  • ಡೆವಿಲ್ಚ್ ಟಾಟೂಸ್, ವಸಂತ್ ವಿಹಾರ್, ನವದೆಹಲಿ
  • ಕೂಲ್ ಟಾಟೂ, ಸೆಕ್ಟಾರ್-62, ನೋಯ್ಡಾ
  • ಯು.ಎಸ್.ಅಂಡ್ ಯು.ಕೆ. ಟಾಟೂಯಿಂಗ್, ಬೆಂಗಳೂರು.

No comments: